ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಪರಿಚಯ

ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ(ಕವಿಕಾ), ಕರ್ನಾಟಕ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, 1933ರಲ್ಲಿ ಮೈಸೂರು ಅರಸರಾದ ಶ್ರೀ. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಆಳ್ವಿಕೆಯಲ್ಲಿ ಗವನ್‌೯ಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ(‌GEF) ಎಂಬ ಹೆಸರಿನಲ್ಲಿ ಕಾಯಾ೯ರಂಭವಾಯಿತು. ಕವಿಕಾ ಸಂಸ್ಥೆಯು ದೇಶದಲ್ಲಿ ವಿದ್ಯುತ್ ವಿತರಣಾ ಪರಿವತ೯ಕ(Distribution Transformers)ಗಳ ಮೊಟ್ಟಮೊದಲ ತಯಾರಕರಾಗಿದ್ದು, ಕಳೆದ ಎಂಟು ದಶಕಗಳಲ್ಲಿ ವಿದ್ಯುತ್‌ ವಿತರಣಾ ಪರಿವತ೯ಕಗಳ ತಯಾರಿಕೆಯಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿ ಉಳಿಸಿಕೊಂಡಿದೆ. ತನ್ನ ಎಂಟು ದಶಕಗಳ ಚರಿತ್ರೆಯಲ್ಲಿ ಆಧುನೀಕರಣ, ತಾಂತ್ರಿಕತೆ ಮತ್ತು ತಯಾರಿಕಾ ವೈವಿಧ್ಯತೆಯನ್ನು ಅಳವಡಿಸಿಕೊಂಡು ತನ್ನ ಕಾಯಾ೯ಚರಣೆಯನ್ನು ವಿಸ್ತರಿಸಿಕೊಂಡಿದೆ.

 

ಕವಿಕಾ ಸಂಸ್ಥೆಯು ಇಂದು, 25ಕೆವಿಎ ರಿಂದ 500ಕೆವಿಎ ಸಾಮಥ್ಯ೯ದ, 11kV/433V ದಜೆ೯ಯ ಹಾಗೂ ಗ್ರಾಹಕರ ಅಗತ್ಯತೆಗಳಿಗನುಗುಣವಾಗಿ ವಿಶೇಷ ರೀತಿಯ ವಿದ್ಯುತ್ ವಿತರಣಾ ಪರಿವತ೯ಕಗಳ ಉತ್ಪಾದನೆಯಲ್ಲಿ ಹೆಸರಾಂತ ಸಂಸ್ಥೆಯಾಗಿ ಹೊರಹೊಮ್ಮಿದೆ.

 

ನಮ್ಮ ಉತ್ಪನ್ನಗಳು

 25ಕೆವಿಎ ರಿಂದ 500ಕೆವಿಎ ಸಾಮಥ್ಯ೯ದ, 11kV/433V ದಜೆ೯ಯ BEE ಸಾಮರ್ಥ್ಯದ 4 ಮತ್ತು 5 ಸ್ಟಾರ್ ವರ್ಗದ ವಿದ್ಯುತ್ ವಿತರಣಾ ಪರಿವತ೯ಕಗಳು.

 

ಗುಣಮಟ್ಟ

 • ತಯಾರಿಕೆಯಲ್ಲಿ ಬಳಸಲಾದ ಎಲ್ಲಾ ಕಚ್ಚಾವಸ್ತುಗಳು IS ನಿರ್ದಿಷ್ಟತೆಗಳ ಪ್ರಕಾರ ಇವೆ.
 • ವಿನ್ಯಾಸ, ಉತ್ಪಾದನೆ ಮತ್ತು ಪರೀಕ್ಷಕ ವಿಧಾನದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ.
 • ಅತ್ಯುತ್ತಮ ಯಂತ್ರೋಪಕರಣಗಳು, ನುರಿತ ತಾಂತ್ರಿಕ ಸಿಬ್ಬಂದಿ ಹಾಗೂ ನಿಷ್ಠಾವಂತ ಕೆಲಸಗಾರರ ಶ್ರಮ.
 • ಮಹತ್ತರ ಸಾಧನ ಸಾಮಾಗ್ರಿಗಳಾದ ವ್ಯಾಕ್ಯೂಮ್‌ ಡ್ರೈಯಿಂಗ್‌ ಪ್ಲಾಂಟ್‌ ಮತ್ತು ಆಯಿಲ್‌ ಫಿಲ್ಟರಿಂಗ್‌ ಸೌಲಭ್ಯ.
 • ಉತ್ಪಾದನೆಯ ಎಲ್ಲಾ ಹಂತಗಳಲ್ಲೂ ಕಟ್ಟುನಿಟ್ಟಾದ ಗುಣ ನಿಯಂತ್ರಣ.
 • ಐಎಸ್‌ 1180:2014ರ ಪ್ರಕಾರ ಪರಿವತ೯ಕಗಳ ಪರೀಕ್ಷೆ.
 • ಸಿಪಿಆರ್‌ಐ ಬೆಂಗಳೂರು ಇದರಲ್ಲಿ ಪರಿವತ೯ಕಗಳ ಮಾದರಿ ಪರೀಕ್ಷೆಗೊಳಪಟ್ಟಿರುತ್ತದೆ.

 

ದೂರದೃಷ್ಟಿ(VISSION)

ಅಧಿಕ ಸಾಮರ್ಥ್ಯದ ಪರಿವತ೯ಕಗಳನ್ನು ಪೂರೈಸಲು ಹಾಗೂ ಸ್ಪರ್ಧಾತ್ಮಕ ದರದಲ್ಲಿ ವರ್ಧಿತ ಗ್ರಾಹಕ ತೃಪ್ತಿಯೊಂದಿಗೆ ಮತ್ತು ಉತ್ಪನ್ನಗಳ ಹಾಗು ಕ್ಯು.ಎಂ.ಎಸ್ ಗುಣಮಟ್ಟವನ್ನು ಸುಧಾರಿಸಲು ಸತತವಾಗಿ ಪ್ರಯತ್ನಿಸಲು ಬದ್ಧವಾಗಿದೆ.

 

ಉದ್ದಿಷ್ಠಕಾರ್ಯ(MISSION)

ಜಾಗತಿಕ ಸ್ಪರ್ಧಾತ್ಮಕ ಪರಿವತ೯ಕಗಳ ಉತ್ಪಾದನಾ ಉದ್ಯಮವಾಗಲು ವಿನ್ಯಾಸ, ತಯಾರಿಕೆಯಲ್ಲಿ ಸ್ವಯಂ-ಅವಲಂಬನೆಯನ್ನು ಸಾಧಿಸುವುದು ಮತ್ತು ಸಲಕರಣೆಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು, ಸಂಬಂಧಿಸಿದ ಪ್ರದೇಶಗಳಿಗೆ ವೈವಿಧ್ಯತೆಯನ್ನು ನೀಡುವ ಸಾಧನವಾಗಿ ಕೆಲಸ ಮಾಡುವಾಗ, ವ್ಯವಹಾರ ಮತ್ತು ವಾಣಿಜ್ಯ ಮಾರ್ಗಗಳಲ್ಲಿ ವೃತ್ತಿನಿರತ ಸಾಮರ್ಥ್ಯ ಬೆಳೆಸಿಕೊಳ್ಳೂವುದು.

 

ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ (ಕವಿಕಾ)

(ಕನಾ೯ಟಕ ರಾಜ್ಯ ಸಕಾ೯ರದ ಸ್ವಾಮ್ಯಕ್ಕೊಳಪಟ್ಟಿದೆ)

ಅ೦ಚೆ ಪೆಟ್ಟಿಗೆ ಸ೦ಖ್ಯೆ-2610, ಮೈಸೂರು ರಸ್ತೆ, ಬೆ೦ಗಳೂರು-560026.

ದೂರವಾಣಿ ಸಂಖ್ಯೆ: 080-26987200/241

ಫ್ಯಾಕ್ಸ್‌ : 080-26744291

ಇಮೇಲ್‌-md@kavika.co.in/ed@kavika.co.in/marketing@kavika.co.in

ವೆಬ್ಸೈಟ್‌: https://kavika.karnataka.gov.in

ಇತ್ತೀಚಿನ ನವೀಕರಣ​ : 25-07-2023 11:09 AM ಅನುಮೋದಕರು: nodal officer


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ (ಕವಿಕಾ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080